ಸಾರ್ವಜನಿಕ ಗ್ರಂಥಾಲಯ ಇಲಾಖೆ
ಕಾರ್ನಾಡ್ ಸದಾಶಿವರಾವ್ ನಗರ ಕೇಂದ್ರ ಗ್ರಂಥಾಲಯ,
ಮಂಗಳೂರು

ಸೇವೆಗಳು

ಬಾವುಟಗುಡ್ಡೆ ಕೇಂದ್ರ ಗ್ರಂಥಾಲಯ ನೀಡುತ್ತಿರುವ ವಿವಿಧ ಸೇವೆಗಳು

Children Section

1. ಮಕ್ಕಳ ವಿಭಾಗ

ಗ್ರಂಥಾಲಯದ ಮಕ್ಕಳ ವಿಭಾಗದಲ್ಲಿ ಮಕ್ಕಳ ಅಭಿರುಚಿಯ ಎಲ್ಲಾ ತರಹದ ಕನ್ನಡ ಹಾಗೂ ಇಂಗ್ಲೀಷ್ ಪುಸ್ತಕಗಳು, ಮಕ್ಕಳಿಗೆ ಸಂಬಂಧಪಟ್ಟ ನಿಯತಕಾಲಿಕೆಗಳು ಲಭ್ಯವಿದ್ದು, ಮಕ್ಕಳ ಆಟಿಕೆಗಳೊಂದಿಗೆ ಮಕ್ಕಳ ವಿಭಾಗವನ್ನು ಆಕಷðಕವಾಗಿ ಸುಸಜ್ಜಿತವಾಗಿ ಜೋಡಿಸಿ ಸೇವೆ ನೀಡಲಾಗುತ್ತಿದೆ.

2. ಅಂತರ್ಜಾಲ ವಿಭಾಗ (Internet Browsing Section)

ಜಿಲ್ಲಾ ಲಯನ್ಸ್ 317ಡಿ ಜಿಲ್ಲಾ ಲಯನೆಸ್ಸ್ ಸಂಘದವರು ದೇಣಿಗೆ ರೂಪದಲ್ಲಿ 06 ಗಣಕಯಂತ್ರಗಳನ್ನು ನೀಡಿರುತ್ತಾರೆ, ಅದನ್ನು ಓದುಗರು 1 ಗಂಟೆಗೆ ರೂ. 15/- ರಂತೆ ಶುಲ್ಕ ಪಾವತಿಸಿ ಅಂತಜಾðಲ ವಿಭಾಗವನ್ನು ಉಪಯೋಗಿಸಿಕೊಳ್ಳುವ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಜೆರಾಕ್ಸ್ ಹಾಗೂ ಪ್ರಿಂಟ್ ಔಟ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

Internet Browsing Section
Exam Section

3. ಸ್ಪರ್ಧಾತ್ಮಕ ಅಧ್ಯಯನ ವಿಭಾಗ

ಸ್ಪರ್ಧಾತ್ಮಕ ಅಧ್ಯಯನ ವಿಭಾಗದಲ್ಲಿ ಸ್ಪಧಾðತ್ಮಕ ಪರೀಕ್ಷೆಗಳನ್ನು ಎದುರಿಸುವ ಆಕಾಂಕ್ಷಿಗಳಿಗೆ ಅಗತ್ಯವಿರುವ IAS, KAS, CET, AIEEE, BANK EXAMS, RAILWAYS, FOREST, GRE, MAT, SAT, NET/SLET, LAW ಮುಂತಾದ ಅತ್ಯಂತ ಅಮೂಲ್ಯ ಗ್ರಂಥಗಳನ್ನು ಒಳಗೊಂಡಿದೆ. ಪ್ರಸ್ತುತ ಸುಮಾರು 3,000 ಸ್ಪಧಾðತ್ಮಕ ಗ್ರಂಥಗಳು ಅಧ್ಯಯನ ವಿಭಾಗಕ್ಕೆ ಸೇಪðಡೆಗೊಂಡಿರುತ್ತದೆ. ಇಲ್ಲಿ ಓದುಗರು ಉಚಿತವಾಗಿ ಗ್ರಂಥಗಳ ಪರಾಮಶðನ ಮಾಡಬಹುದು.

4. ಕಂಪ್ಯೂಟರೀಕೃತ ಗ್ರಂಥಾಲಯ (ಇ-ಗ್ರಂಥಾಲಯ)

ಗ್ರಂಥಾಲಯದ ಪುಸ್ತಕಗಳ ಎರವಲು ಹಾಗೂ ದಾಖಲಾತಿ ಕ್ರಮವು ಇ-ಗ್ರಂಥಾಲಯ ತಂತ್ರಾಂಶ ಬಳಸಿ ಕಂಪ್ಯೂಟರಿನಲ್ಲೇ ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯದಲ್ಲಿ ಅತ್ಯುತ್ತಮ ಸಾಹಿತ್ಯ ಪುಸ್ತಕಗಳು, ಕಾದಂಬರಿಗಳು, ಆತ್ಮಚರಿತ್ರೆಗಳು, ವಿಜ್ಞಾನ, ತಂತ್ರಜ್ಞಾನ, ಕÈಷಿ, ಆಧ್ಯಾತ್ಮಿಕ, ಆರೋಗ್ಯ, ವಾಸ್ತು, ಕಲೆ, ವಾಣಿಜ್ಯ, ಕಾನೂನು ಸಂಬಂಧಿತ ಪುಸ್ತಕಗಳು, ಸ್ಥಳ ಪುರಾಣಗಳು, ಮನಃಶಾಸ್ತ್ರ, ಶಿಕ್ಷಣ, ರಾಜಕೀಯ ಮುಂತಾದ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ಲಭ್ಯವಿದೆ.

ಗ್ರಂಥಾಲಯದ ಸಂಗ್ರಹಗಳನ್ನು ವಿಷಯ, ಲೇಖಕ-ಲೇಖಕಿವಾರು ಜೋಡಿಸಲಾಗಿದೆ. ಸದಸ್ಯರು ತಮಗೆ ಬೇಕಾದ ಪುಸ್ತಕಗಳನ್ನು ಕಂಪ್ಯೂಟರ್ ಮೂಲಕವೇ ಆಯ್ದುಕೊಳ್ಳಬಹುದು. ಇದರಿಂದ ಪುಸ್ತಕಗಳನ್ನು ಹುಡುಕುವ ಸಮಯ ಉಳಿಯಲಿದೆ. ಅಲ್ಲದೆ ತಮ್ಮ ಆಯ್ಕೆಯ ಪುಸ್ತಕಗಳು ಇತರ ಓದುಗರು ಕೊಂಡೊಯ್ದಿದ್ದರೆ ಅದನ್ನೂ ಕಂಪ್ಯೂಟರ್ ಮೂಲಕ ತಿಳಿಯಬಹುದುದಾಗಿದೆ. ಪ್ರತಿಯೊಬ್ಬ ಸದಸ್ಯರಿಗೂ ಬಾರ್ ಕೋಡ್ ಮಾಡಿದ ಗುರುತಿನ ಚೀಟಿಯೊಂದನ್ನು ನೀಡಲಾಗುತ್ತದೆ. ಪುಸ್ತಕವನ್ನು ಎರವಲು ನೀಡುವ ಸಂದಭðದಲ್ಲಿ ಸ್ಕ್ಯಾನ್ ಮಾಡಿಸಿ ಕೊಡುವುದರಿಂದ ಪುಸ್ತಕ ಕಣ್ಮರೆಯಾಗುವ, ಹಾನಿಯಾಗುವ ಅಪಾಯವೂ ತಪ್ಪಲಿದೆ.

Computerized Section
News Paper Section

5. ದಿನಪತ್ರಿಕೆ ಹಾಗೂ ನಿಯತಕಾಲಿಕೆ ವಿಭಾಗ

ಗ್ರಂಥಾಲಯದಲ್ಲಿ ಒಟ್ಟು ಪ್ರಚಲಿತ ಭಾಷೆಯ19 ದಿನಪತ್ರಿಕೆ ಹಾಗೂ 54 ನಿಯತಕಾಲಿಕೆಗಳು ಓದುಗರಿಗೆ ಲಭ್ಯವಿದೆ. ಅಲ್ಲದೆ ಸುಮಾರು 238 ಕ್ಕಿಂತಲೂ ಅಧಿಕ ಉಚಿತ ನಿಯತಕಾಲಿಕೆಗಳು ಈ ಗ್ರಂಥಾಲಯಕ್ಕೆ ಸರಬರಾಜಾಗುತ್ತದೆ.

6. ಉದ್ಯೋಗ ಮಾಹಿತಿ

ಗ್ರಂಥಾಲಯಕ್ಕೆ ಸರಬರಾಜಾಗುವ ದಿಪತ್ರಿಕೆಗಳಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿ ಹಾಗೂ ಇತರ ಮೂಲಗಳಿಂದ ಲಭ್ಯವಿರುವ ಉದ್ಯೋಗ ಮಾಹಿತಿಗಳನ್ನು ಕಲೆ ಹಾಕಿ ಗ್ರಂಥಾಲಯದ ಸೂಚನಾ ಫಲಕದಲ್ಲಿ ಅಳವಡಿಸುವ ಮೂಲಕ ಓದುಗರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಈ ವ್ಯವಸ್ಥೆಯಿಂದ ಹಲವಾರು ಗ್ರಂಥಾಲಯದ ಓದುಗರು ಪ್ರಯೋಜನವನ್ನು ಪಡೆಯುತ್ತಿದ್ದಾರೆ.

Jobs Section
Mobile Library Section

7. ಸಂಚಾರಿ ಗ್ರಂಥಾಲಯ

ಎಂ.ಎಸ್.ಏಕಾಂಬರ ರಾವ್ ಸ್ಮಾರಕ ಸಂಚಾರಿ ಗ್ರಂಥಾಲಯವು 1987 ರಲ್ಲಿ ಪ್ರಾರಂಭಗೊಂಡಿದ್ದು, ಸುಮಾರು 29 ವಷðಗಳ ಸುದೀಘð ಸೇವೆಯನ್ನು ಓದುಗರಿಗೆ ನೀಡುತ್ತಾ ಬಂದಿದ್ದು ಗ್ರಂಥಾಲಯದಿಂದ ಓದುಗರ ಮನೆ ಬಾಗಿಲಿಗೆ ಪುಸ್ತಕಗಳನ್ನು ಒದಗಿಸುವ ಮೂಲಕ 2015ರಲ್ಲಿ ನೂತನ ಸುಸಜ್ಜಿತ ವಾಹನವನ್ನು ಸೇವೆಗೆ ನೀಡಲಾಗಿದೆ. ನಗರದಾದ್ಯಂತ 22 ಸ್ಥಳಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ಕಾಯðನಿವðಹಿಸುತ್ತಿದೆ.

8. ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆ

ಮಂಗಳೂರಿನ ನಗರ ಕೇಂದ್ರ ಗ್ರಂಥಾಲಯದ ಅಧೀನದಲ್ಲಿ ಕಾಯðನಿವðಹಿಸುತ್ತಿರುವ ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆಯು 2007 ರಲ್ಲಿ ಪ್ರಾರಂಭಗೊಂಡಿದ್ದು, ಪ್ರಸ್ತುತ 12ನೇ ತಂಡದ ತರಬೇತಿಯನ್ನು ಪೂರೆÊಸಿರುತ್ತದೆ. ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಹಾಸನ, ಮೆÈಸೂರು, ಮಂಡ್ಯ ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಯ ವಿದ್ಯಾಥಿðಗಳ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ಈ ತರಬೇತಿಯನ್ನು ನೀಡಲಾಗುತ್ತಿದೆ. ಪ್ರತೀ ತಂಡದಲ್ಲಿ 80 ಜನ ವಿದ್ಯಾಥಿðಗಳಿಗೆ ತರಬೇತಿ ಪಡೆಯಲು ಅವಕಾಶವಿರುತ್ತದೆ.

4 ತಿಂಗಳ ತರಬೇತಿಯಲ್ಲಿ ನುರಿತ ಪ್ರಾಧ್ಯಾಪಕರಿಂದ ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವನ್ನು ಬೋಧಿಸಲಾಗುತ್ತಿದೆ. ಈ 4 ತಿಂಗಳ ಗ್ರಂಥಾಲಯ ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ತೇಗðಡೆಯಾದ ಅಭ್ಯಥಿðಗಳು ಯಾವುದಾದರೂ ಸಕಾðರಿ, ಅರೆಸಕಾðರಿ, ಖಾಸಗಿ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಲು ಅಹðರಾಗಿರುತ್ತಾರೆ, ಹಾಗೂ ಸಾವðಜನಿಕ ಗ್ರಂಥಾಲಯ ಇಲಾಖೆಯಲ್ಲಿ ಸ್ಪಧಾðತ್ಮಕ ಪರೀಕ್ಷೆಗಳ ಮೂಲಕ ಗ್ರಂಥಾಲಯ ಸಹಾಯಕರ ಹುದ್ದೆಗೆ ನೇಮಕಗೊಳ್ಳಲು ಅಹðರಾಗಿರುತ್ತಾರೆ.

Jobs Section