ಮತ್ತೆ ಮೇಲಕ್ಕೆ

ಸಾರ್ವಜನಿಕ ಗ್ರಂಥಾಲಯ ಇಲಾಖೆ
ಕಾರ್ನಾಡ್ ಸದಾಶಿವರಾವ್ ನಗರ ಕೇಂದ್ರ ಗ್ರಂಥಾಲಯ,
ಮಂಗಳೂರು

ನಗರ ಕೇಂದ್ರ ಗ್ರಂಥಾಲಯ, ಮಂಗಳೂರು


1948ರಲ್ಲಿ ಮದ್ರಾಸ್ ಸರ್ಕಾರ ಪ್ರಥಮವಾಗಿ ಮದ್ರಾಸ್ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೆ ತಂದಿತು. ಹಾಗೂ ಭಾರತದಲ್ಲಿ ಗ್ರಂಥಾಲಯ ಚಳವಳಿಯ ಪಿತಾಮಹಾರೆನಿಸಿದ್ದ ಡಾ| ಎಸ್.ಆರ್.ರಂಗನಾಥನ್ ರವರು ರಚಿಸಿದ ಮದ್ರಾಸ್ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯಂತೆ ಪ್ರತಿಯೊಂದು ಜಿಲ್ಲೆಯಲ್ಲಿ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಗಳು (Local Library Authority) ಅಸ್ತಿತ್ವಕ್ಕೆ ಬಂದವು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಾರ್ವಜನಿಕ ಗ್ರಂಥಾಲಯಗಳು ಸ್ಥಾಪನೆಯಾಯಿತು. 1950ನೇ ಆಗಸ್ಟ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರ ರಚನೆಯಾಗಿ 1951 ರಲ್ಲಿ ದೇಶಭಕ್ತ ಕಾರ್ನಾಡ್ ಸದಾಶಿವರಾವ್ ಅವರ ಹೆಸರಿನಲ್ಲಿ ತನ್ನ ಕಾರ್ಯ ಆರಂಭಿಸಿತು.

1965ನೇ ಸಾಲಿನಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯು ಜಾರಿಗೆ ಬಂದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗ್ರಂಥಾಲಯವನ್ನು ದಿ: 15-01-1969 ರಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿತು. ಅದು ಈಗ “ಕಾರ್ನಾಡ್ ಸದಾಶಿವ ರಾವ್” ರವರ ಸ್ಮಾರಕ ನಗರ ಕೇಂದ್ರ ಗ್ರಂಥಾಲಯ ಹೆಸರಿನಲ್ಲಿ ಕಾರ್ಯ ನಿವðಹಿಸುತ್ತಿದೆ. ಮದ್ರಾಸ್ ಪ್ರಾಂತ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಉತ್ತಮ ಗ್ರಂಥಾಲಯಗಳನ್ನು ಹೊಂದಿ ಅತ್ಯುತ್ತಮ ಸೇವೆ ನೀಡುವ ಗ್ರಂಥಾಲಯ ಪ್ರಾಧಿಕಾರವೆಂಬ ಹಿರಿಮೆಗೆ ಪಾತ್ರರಾಗಲು ಹಾಗೂ ಗ್ರಂಥ ಪ್ರೇಮಿಗಳು ಸದಾ ಸ್ಮರಿಸುವ ಕೆಲಸ ಮಾಡಿದ ಹಿರಿಮೆ ದಿ| ಎಂ. ಎಸ್. ಏಕಾಂಬರ ರಾವ್ ಅವರಿಗೆ ಸಲ್ಲುವುದು. ಇವರು ಪ್ರಾಧ್ಯಾಪಕರಾಗಿ, ಗ್ರಂಥಾಲಯ ತಜ್ಞರಾದ ಪದ್ಮಶ್ರೀ ಎಸ್.ಆರ್ ರಂಗನಾಥನ್ ರವರ ಪರಮ ಮಿತ್ರರಾಗಿ, ಜನ ಜೀವನದಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರವಹಿಸುವ ಸದ್ದುದೇಶ ಪ್ರೇರಕ ಶಕ್ತಿಯಾಗಿ ಒಂದು ದಶಕದ ಪ್ರಾಧಿಕಾರದ ಅಧ್ಯಕ್ಷರಾಗಿ, ಗ್ರಂಥಾಲಯಗಳ ನಿರ್ವಹಣೆಯಲ್ಲಿ ಸಫಲತೆಯನ್ನು ಕಂಡ ಮಹಾನುಭಾವರು.

1969ರಿಂದ ಮಂಗಳೂರು ನಗರ ಗ್ರಂಥಾಲಯ ಪ್ರಾಧಿಕಾರ ಮತ್ತು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಎಂಬ ಎರಡು ಪ್ರಾಧಿಕಾರಗಳು ಅಸ್ಥಿತ್ವಕ್ಕೆ ಬಂದವು. ಅಂದಿನಿಂದ ದಕ್ಷಿಣ ಕನ್ನಡದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಶಾಖೆಗಳನ್ನು ವಿಸ್ತರಿಸುತ್ತ ಓದುವ ಆಸಕ್ತ ಸಾಕ್ಷರಸ್ಥ ನಾಗರಿಕರನ್ನು ತನ್ನತ್ತ ಅಕರ್ಷಿಸುತ್ತಾ ಜಿಲ್ಲೆಯ ಜನ ಜೀವನದ ಅವಿಭಾಜ್ಯ ಅಂಗವಾಗಿ ಸ್ತುತ್ಯಾಅನರ್ಹ ಸೇವೆಯನ್ನು ನೀಡುತ್ತಾ ಬರುತ್ತಿದೆ. ಮಂಗಳೂರು ನಗರ ಕೇಂದ್ರ ಗ್ರಂಥಾಲಯವು ನಗರ ವ್ಯಾಪ್ತಿಯಲ್ಲಿ ಜನತೆಗೆ ಜ್ಞಾನದ ದಾಹವನ್ನು ನೀಗಿಸುತ್ತಾ ಬಂದಿದೆ.

ಮಂಗಳೂರು ನಗರ ಕೇಂದ್ರ ಗ್ರಂಥಾಲಯವು ಮಂಗಳೂರು ಮಹಾನಗರ ಪಾಲಿಕೆಯ ವಿಸ್ತೀರ್ಣದ ಪರಿಮಿತಿಯಲ್ಲಿ ಬರುತ್ತದೆ. ಮಂಗಳೂರು ನಗರ ಕೇಂದ್ರ ಗ್ರಂಥಾಲಯದ ಕೇಂದ್ರ ಕಛೇರಿಯು ನಗರದ ಬಾವುಟಗುಡ್ಡೆಯಲ್ಲಿದ್ದು ಉಳಿದ ಎಲ್ಲಾ ಶಾಖಾ ಗ್ರಂಥಾಲಯಗಳು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲೆಡೆ ವ್ಯಾಪಿಸಿದೆ. ಮಂಗಳೂರು ಮಹಾನಗರ ಪಾಲಿಕೆಯಿಂದ ವಾರ್ಷಿಕವಾಗಿ ಪಾವತಿಸುವ ಗ್ರಂಥಾಲಯ ಕರದಿಂದಲೇ ಎಲ್ಲಾ ಗ್ರಂಥಾಲಯಗಳ ನಿರ್ವಹಣೆ ನಡೆಯುತ್ತಿದೆ.

ಇತ್ತೀಚಿನ ಚಟುವಟಿಕೆಗಳು ಮತ್ತು ಸುದ್ದಿ